Current Date 09 May, 2026

"ದರ್ಶನ್ ಹೊರ ಬಂದ್ಮೇಲೆ ಡಬಲ್ ಕ್ರೇಜ್ ಇರುತ್ತೆ, ಒಂದೂವರೆ ಪಟ್ಟು ವ್ಯಾಪಾರ ಆಗುತ್ತೆ"; ನಿರ್ಮಾಪಕ ಕೆ. ಮಂಜು

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡ ಚಿತ್ರರಂಗ ಮತ್ತೆ ಚರ್ಚೆಯಲ್ಲಿದೆ. ಆದರೆ, ಈ ಬಾರಿ ಸಿನಿಮಾ ವಿಚಾರಕ್ಕೆ ಅಲ್ಲ. ಬದಲಾಗಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ವಿಚಾರಕ್ಕೆ. ಕನ್ನಡದ ಸೂಪರ್‌ಸ್ಟಾರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ರೇಣುಕಾಸ್ವಾಮಿ ಅನ್ನುವ ಕಾರಣಕ್ಕೆ ಕೊಲೆ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ, ದರ್ಶನ್‌ರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಪೊಲೀಸ್ ಕಸ್ಟಡಿಗೆ ನೀಡಿದ ಬಳಿಕ ದರ್ಶನ್ ಈಗ ನ್ಯಾಯಂಗ ಬಂಧನದಲ್ಲಿ ಇದ್ದಾರೆ. ನಾಳೆ (ಜುಲೈ 4) ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತೆ.